ಉಡುಪಿ ಜನಪ್ರೀಯ ಉದಯವಾಣಿ ದಿನಪತ್ರಿಕೆಯು ಉಡುಪಿಯ ಆರ್ಟಿಸ್ಟ್ ಫೋರಂನ ಸಹಯೋಗದೊಂದಿಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿಕೊಂಡು ಬರುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ-2024’ರ ಮೊದಲ ಹಂತದ ಸ್ಪರ್ಧೆಯು ಉಡುಪಿ, ಕಾಸರಗೋಡು, ದ.ಕ. ಜಿಲ್ಲೆಯ 10 ತಾಲೂಕುಗಳ 9 ಕೇಂದ್ರಗಳಲ್ಲಿ ಅ. 26, 27ರಂದು ನಡೆಯಲಿದೆ.
ಉದಯವಾಣಿ ದಿನಪತ್ರಿಕೆಯು ಉಡುಪಿಯ ಆರ್ಟಿಸ್ಟ್ ಫೋರಂನ ಸಹಯೋಗದೊಂದಿಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿಕೊಂಡು ಬರುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ-2024’ರ ಮೊದಲ ಹಂತದ ಸ್ಪರ್ಧೆಯು ಉಡುಪಿ, ಕಾಸರಗೋಡು, ದ.ಕ. ಜಿಲ್ಲೆಯ 10 ತಾಲೂಕುಗಳ 9 ಕೇಂದ್ರಗಳಲ್ಲಿ ಅ. 26, 27ರಂದು ನಡೆಯಲಿದೆ.
ಅ. 27ರಂದು ಕಡಬ ತಾಲೂಕು ಮಟ್ಟದ ಸ್ಪರ್ಧೆಯು ಸೈಂಟ್ ಜೋಕಿಂ ಸಮುದಾಯ ಭವನ ಕಡಬ, ಸುಳ್ಯ ತಾಲೂಕು ಮಟ್ಟದ ಸ್ಪರ್ಧೆಯು ಕೆವಿಜಿ ಕಾನೂನು ಮಹಾ ವಿದ್ಯಾಲಯ, ಚೆನ್ನಕೇಶವ ದೇವಸ್ಥಾನದ ಬಳಿ, ಸುಳ್ಯ, ಕುಂದಾಪುರ ತಾಲೂಕು ಮಟ್ಟದ ಸ್ಪರ್ಧೆಯು ಎಚ್.ಎಂ.ಎಂ ಮತ್ತು ವಿ.ಕೆ.ಆರ್.ಶಾಲೆಗಳು, ಬಸ್ರೂರು ಮೂರ್ಕೈ, ಬ್ರಹ್ಮಾವರ ತಾಲೂಕು ಮಟ್ಟದ ಸ್ಪರ್ಧೆಯು ಬಂಟರ ಭವನ, ಬಸ್ನಿಲ್ದಾಣದ ಎದುರು, ಬ್ರಹ್ಮಾವರ ಇಲ್ಲಿ ಬೆಳಗ್ಗೆ 9.30ರಿಂದ 11.30ರ ತನಕ ನಡೆಯಲಿದೆ.
ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಯು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಸಂತೆಕಟ್ಟೆ ಬೆಳ್ತಂಗಡಿ, ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಯು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬೈಂದೂರು ತಾಲೂಕು ಮಟ್ಟದ ಸ್ಪರ್ಧೆಯು ಜೆ.ಎನ್.ಆರ್. ಕಲಾ ಮಂದಿರ, ಬೈಂದೂರು, ಹೆಬ್ರಿ ತಾಲೂಕು ಮಟ್ಟದ ಸ್ಪರ್ಧೆಯು ಎಸ್. ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿಯಲ್ಲಿ ಜರಗಲಿದೆ. ಈ ನಾಲ್ಕು ತಾಲೂಕುಗಳಲ್ಲಿ ಸ್ಪರ್ಧೆಯು ಅ. 27ರ ಮಧ್ಯಾಹ್ನ 3ರಿಂದ 5ರ ವರೆಗೆ ನಡೆಯಲಿದೆ.
ಈ ಬಾರಿ ಗಡಿನಾಡ ಎಳೆಯ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಸರಗೋಡು ಹಾಗೂ ಮಂಜೇಶ್ವರ ಉಭಯ ತಾಲೂಕು ಮಟ್ಟದ ಸ್ಪರ್ಧೆಯನ್ನು ಆರಂಭಿಸಲಾಗಿದೆ.
ಕಳೆದ ಬಾರಿ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಡುಪಿ, ದ.ಕ. ಜಿಲ್ಲೆಯ 16 ತಾಲೂಕುಗಳಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸುವ ಅತ್ಯಂತ ದೊಡ್ಡ ಸ್ಪರ್ಧಾ ಕಾರ್ಯಕ್ರಮ ಇದಾಗಿದೆ.
2ನೇ ಹಂತದ ಸ್ಪರ್ಧೆಯು ನ. 2, 3ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ 8 ತಾಲೂಕುಗಳಲ್ಲಿ ನಡೆಯಲಿದೆ. ನ. 10ರಂದು ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗಾಗಿ ಮೂರು ಜಿಲ್ಲಾಮಟ್ಟದ ಸ್ಪರ್ಧೆಯು ಮಂಗಳೂರಿನಲ್ಲಿ ಜರಗಲಿದೆ.
ಸ್ಪರ್ಧೆಯ ವಿಷಯ
1ನೇ ತರಗತಿಯಿಂದ 3ನೇ ತರಗತಿ ಹಾಗೂ 4ರಿಂದ 7ನೇ ತರಗತಿಯ ಮಕ್ಕಳು ಐಚ್ಚಿಕ ವಿಷಯದಲ್ಲಿ ಚಿತ್ರ ಬಿಡಿಸಬಹುದು. 8ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಸ್ಥಳದಲ್ಲಿಯೇ ವಿಷಯ ತಿಳಿಸಲಾಗುತ್ತದೆ.
ನಿಯಮಾವಳಿ
ಸ್ಪರ್ಧಿಗಳು ಸ್ಥಳದಲ್ಲಿ ಹೆಸರು ನೋಂದಾಯಿಸಬೇಕು. ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ. ಚಿತ್ರಬಿಡಿಸಲು ಬೇಕಾದ ಇತರ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ಮತ್ತು ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಫಲಿತಾಂಶ ಮತ್ತು ವಿಜೇತರ ಚಿತ್ರಗಳನ್ನು ಉದಯವಾಣಿಯಲ್ಲಿ ಪ್ರಕಟಿಸಲಾಗುತ್ತದೆ.
Publisher: ಕನ್ನಡ ನಾಡು | Kannada Naadu